ಕಾರ್ನೊಸೀನ್

 ಬೀಟಾ ಅಲನೀನ್ ಎಂಬ ಅಪೂರ್ವದ ಅಮೈನೊ ಆಮ್ಲ ಮತ್ತು ಹಿಸ್ಟಡೀನ್ ಎಂಬ ಅಮೈನೊ ಆಮ್ಲ ಸೇರಿ ಆಗಿರುವ ರಸಾಯನ ವಸ್ತು. ಇದರ ಅಣು ರಚನೆ ಹೀಗಿದೆ.

 

ಚಿತ್ರ-1

 

ಇದು ಎಲ್ಲ ರೀತಿಯ ಕಶೇರುಕ ಪ್ರಾಣಿಗಳ ಮಾಂಸಖಂಡಗಳಲ್ಲಿ ಸಾವಿರದಲ್ಲಿ ಸುಮಾರು ಮೂರು ಭಾಗದಷ್ಷು ಇರುವುದು. ಇದರೊಂದಿಗೆ ಅನ್‍ಸರೀಸ್ ಎಂಬುದೂ ಇರುತ್ತದೆ. ಅಸ್ಥಿಸ್ನಾಯುಗಳಲ್ಲಿ ಕಡಿಮೆ. ಹಾವಿನ ಮಾಂಸಖಂಡದಲ್ಲಿರುವ ಓಫಿಡೀನ್ ಎಂಬುದು ಕಾರ್ನೊಸೀನಿನಿಂದಾದುದು. ಚುಚ್ಚುಮದ್ದಿನಂತೆ ಈ ರಾಸಾಯನಿಕವನ್ನು ಕೊಟ್ಟಾಗ ರಕ್ತದ ಒತ್ತಡವನ್ನು ಸ್ವಲ್ಪ ಕಡಿಮೆಮಾಡುವ ಶಕ್ತಿ ಇದಕ್ಕೆ ಇದೆಯೆಂದು ತಿಳಿದಿದೆ. ಇದರ ಅಣುವನ್ನು ಒಡೆದು ಹಿಸ್ಟಡೀನ್ ಅಮೈನೋ ಆಮ್ಲವನ್ನು ಬಿಡುಗಡೆ ಮಾಡುವ ಎನ್ಜೈಮ್ ಮೂತ್ರಜನಕಾಂಗದಲ್ಲಿದೆ.  

(ಎ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ